ಮೆಕ್ಸಿಕೋ

	ಮಧ್ಯ ಅಮೆರಿಕದ ಒಂದು ಸಂಯುಕ್ತ ಗಣರಾಜ್ಯ. ಇದರ ಉತ್ತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಪಶ್ಚಿಮ ಮತ್ತು ದಕ್ಷಿಣದಲ್ಲಿ ಪೆಸಿಫಿಕ್ ಸಾಗರ, ಆಗ್ನೇಯದಲ್ಲಿ ಗ್ವಾಟಮಾಲ, ಬಲೀeóï ಹಾಗೂ ಕೆರಿಬಿಯನ್ ಸಮುದ್ರ ಮತ್ತು ಈಶಾನ್ಯದಲ್ಲಿ ಮೆಕ್ಸಿಕೋಕೊಲ್ಲಿ ಇವೆ. ವಿಸ್ತೀರ್ಣ 1,958,201 ಚಕಿಮೀ. ಇದರಲ್ಲಿ ಜಲಾವೃತ ಪ್ರದೇಶ 49,510 ಚಕಿಮೀ, ಭೂಭಾಗ 1,908,691 ಚಕಿಮೀ. ಇದರಲ್ಲಿ ಒಟ್ಟು 5,073 ಚಕಿಮೀ ವಿಸ್ತೀರ್ಣದ ಜನವಸತಿ ಇಲ್ಲದ ದ್ವೀಪಗಳು ಸೇರಿವೆ. ಜನಸಂಖ್ಯೆ ಸು.97,000,000(1998). ಜನಸಾಂದ್ರತೆ ಚಕಿಮೀಗೆ 4.06 (1986 ಅಂ). ಅಧಿಕೃತ ಭಾಷೆ ಸ್ಪ್ಯಾನಿಷ್. ರಾಜಧಾನಿ ಮೆಕ್ಸಿಕೋ ನಗರ. ಇದರ ಜನಸಂಖ್ಯೆ 9,191,295(1979).

	ಮೇಲ್ಮೈ ಲಕ್ಷಣಗಳು: ಮೆಕ್ಸಿಕೋ ಹೆಚ್ಚು ಮರುಭೂಮಿ ಪ್ರದೇಶವಾಗಿದ್ದು ಇಲ್ಲಿ ಯಾವ ದೊಡ್ಡ ನದಿಗಳೂ ಇಲ್ಲ. ದೇಶದ ಬಹುಪಾಲು ಪ್ರದೇಶದಲ್ಲಿ ಜಲಾಭಾವವಿದೆ. ಮೆಕ್ಸಿಕೋ ದೇಶ ಉತ್ತರ ಭಾಗದಲ್ಲಿ ವಿಶಾಲವಾಗಿದ್ದು 2,100ಕಿಮೀ ಅಗಲವಿದೆ. ದಕ್ಷಿಣಕ್ಕೆ ಬರುತ್ತಿದ್ದಂತೆ ಕ್ರಮೇಣ ಅದರ ವಿಸ್ತೀರ್ಣ ಕಡಿಮೆಯಾಗಿ ದಕ್ಷಿಣ ತುದಿಯಲ್ಲಿಯ ಭೂಕಂಠ ಕೇವಲ 225ಕಿಮೀ ಅಗಲವಿದೆ. ಮೆಕ್ಸಿಕೋದ ವೈಶಿಷ್ಟ್ಯವೆಂದರೆ ಬಾಜಾ ಕ್ಯಾಲಿಫೋರ್ನಿಯ ಪರ್ಯಾಯ ದ್ವೀಪ. 40ರಿಂದ 241ಕಿಮೀ ಅಗಲವಿದ್ದು ಮೆಕ್ಸಿಕೋದ ವಾಯವ್ಯ ತುದಿಯಿಂದ ಆಗ್ನೇಯದೆಡೆಗೆ 1,223.60 ಕಿಮೀ ದೂರದವರೆಗೆ ಪೆಸಿಫಿಕ್ ತೀರಕ್ಕೆ ಸಮಾಂತರವಾಗಿ ಇದೆ. ಇದನ್ನು ಮುಖ್ಯ ಭೂಭಾಗದಿಂದ ಕ್ಯಾಲಿಫೋರ್ನಿಯ ಕೊಲ್ಲಿ ಪ್ರತ್ಯೇಕಿಸಿದೆ. ಬಾಜಾ ಕ್ಯಾಲಿಫೋರ್ನಿಯ ಪರ್ಯಾಯದ್ವೀಪದಿಂದ 483 ಕಿಮೀ ದಕ್ಷಿಣಕ್ಕೆ ಹಾಗೂ ಮ್ಯಾನ್‍ಜûನಿಲೋ ಬಂದರಿನ 724 ಕಿಮೀ ಪಶ್ಚಿಮಕ್ಕೆ ಅಗ್ನಿ ಪರ್ವತಗಳಿಂದ ಕೂಡಿದ ರಿವಿಲ್ಲಗಗೀಡೊ ದ್ವೀಪಸ್ತೋಮವಿದೆ.

	ಮೆಕ್ಸಿಕೋವನ್ನು ಸೀಯರ್‍ಮಾಡ್ರೀ ಪರ್ವತಸ್ತೋಮಗಳು, ಮಧ್ಯಭಾಗದ ಪ್ರಸ್ಥಭೂಮಿ, ಚಿಯಾಪಾಸ್ ಮೇಲ್ನಾಡು, ಯೂಕಟಾನ್ ಪರ್ಯಾಯದ್ವೀಪ, ತೀರದ ಬಯಲುಪ್ರದೇಶ ಮತ್ತು ಬಾಜಾ ಕ್ಯಾಲಿಫೋರ್ನಿಯ ಎಂದು ಆರು ಭಾಗಗಳಾಗಿ ವಿಂಗಡಿಸಬಹುದು.

	ಸೀಯರ್ ಮಾಡ್ರೀ ಪರ್ವತಸ್ತೋಮ: ಮೆಕ್ಸಿಕೋದ ಭಾಗವನ್ನು ಆವರಿಸಿಕೊಂಡಿದೆ. ಗಿ ಆಕಾರದಲ್ಲಿರುವ ಈ ಪರ್ವತಸ್ತೋಮದ ಕೆಳಭಾಗ ದಕ್ಷಿಣ ಮೆಕ್ಸಿಕೋದಲ್ಲಿದ್ದು ಎರಡು ಬಾಹುಗಳು ಉತ್ತರದೆಡೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಡಿಯವರೆಗೂ ಹಬ್ಬಿಕೊಂಡಿವೆ. ಪೂರ್ವಬಾಹು ಮೆಕ್ಸಿಕೋ ಕೊಲ್ಲಿಯ ತೀರಕ್ಕೆ ಸಮಾಂತರವಾಗಿದ್ದು ಇದನ್ನು ಸೀಯರ್‍ಮಾಡ್ರೀ ಓರಿಯಂಟಲ್ ಎಂದು ಕರೆಯುತ್ತಾರೆ. ಪಶ್ಚಿಮದ ಬಾಹು ಪೆಸಿಫಿಕ್ ತೀರ ಹಾಗೂ ಒಳನಾಡಿನ ಮಧ್ಯೆ ಅಡ್ಡಗಟ್ಟೆಯಾಗಿದ್ದು ಇದಕ್ಕೆ ಸೀಯರ್ ಮಾಡ್ರೀ ಅಕ್ಸಿಡೆಂಟಲ್ ಎಂದು ಹೆಸರು. ಇದು ಸೀಯರ್ ಮಾಡ್ರೀ ಓರಿಯಂಟಲ್‍ಗಿಂತ ಹೆಚ್ಚು ಪ್ರದೇಶವನ್ನು ಆವರಿಸಿಕೊಂಡಿದ್ದು ಏರುಪೇರುಗಳಿಂದ ಕೂಡಿದೆ. ಪಶ್ಚಿಮ ಬಾಹುವಿನ ಸರಾಸರಿ ಎತ್ತರ 3,047.56 ಮೀ. ಆರಿeóÉೂೀನ ಹಾಗೂ ನ್ಯೂ ಮೆಕ್ಸಿಕೋಗಳ ಒಳಭಾಗದವರೆಗೂ ಚಾಚಿಕೊಂಡಿದೆ. ಗಿ ಆಕಾರದ ತಳಭಾಗಕ್ಕೆ ಸೀಯರ್ ಮಾಡ್ರೀ ದೆಲ್ ಸುರ್ ಎಂಬ ಹೆಸರಿದ್ದು ಇದು ಮೆಕ್ಸಿಕೋ ನಗರ ಹಾಗೂ ಟವಾಂಟ್‍ಪೆಕ್ ಭೂಕಂಠದ ಮಧ್ಯಭಾಗದಲ್ಲಿದೆ.

	ಮಧ್ಯಭಾಗದ ಪ್ರಸ್ಥಭೂಮಿ: ಇದು ದೇಶದ ಭಾಗವನ್ನು ಆವರಿಸಿದ್ದು ಸೀಯರ್ ಮಾಡ್ರೀ ಓರಿಯಂಟಲ್ ಹಾಗೂ ಸೀಯರ್ ಮಾಡ್ರೀ ಅಕ್ಸಿಡೆಂಟಲ್‍ಗಳ ನಡುವೆ ಇದೆ. ಈ ಪ್ರಸ್ಥಭೂಮಿ ಅಮೆರಿಕ ಸಂಯುಕ್ತಸಂಸ್ಥಾನದ ಕಡೆಯ ಗಡಿಭಾಗದಲ್ಲಿ 1097 ಮೀ ಎತ್ತರದಿಂದ ಪ್ರಾರಂಭವಾಗಿ ಮೆಕ್ಸಿಕೋ ನಗರದ ಸಮೀಪದಲ್ಲಿ ಸು.2,34,384 ಮೀಗೂ ಹೆಚ್ಚು ಎತ್ತರವಿದೆ. ಇದರ ದಕ್ಷಿಣ ಭಾಗ ಫಲವತ್ತಾಗಿದ್ದು ಇಲ್ಲಿ ಮೆಕ್ಸಿಕೋದ ಒಟ್ಟು ಜನಸಂಖ್ಯೆಯ  ಭಾಗದಷ್ಟು ಜನ ವಾಸಿಸುತ್ತಾರೆ. ಉತ್ತರಭಾಗ ಮರುಭೂಮಿ ಪ್ರದೇಶವಾಗಿದ್ದು ಜನವಸತಿ ಹೆಚ್ಚಾಗಿಲ್ಲ. ಪ್ರಸ್ಥಭೂಮಿಯ ಮಧ್ಯಭಾಗದ ದಕ್ಷಿಣ ತುದಿಯಲ್ಲಿ ವಿಶಾಲವಾದ ಹಾಗೂ ಫಲವತ್ತಾದ ಮೆಕ್ಸಿಕೋ ಕಣಿವೆಯಿದ್ದು ಇಲ್ಲಿಯೇ ಮೆಕ್ಸಿಕೋ ನಗರವಿದೆ.

	ಮೆಕ್ಸಿಕೋ ಕೊಲ್ಲಿಯ ದಕ್ಷಿಣಕ್ಕೆ ಅನೇಕ ಅಗ್ನಿಪರ್ವತಗಳಿದ್ದು ಇದರಲ್ಲಿ ಕೆಲವು ಜೀವಂತವಾಗಿವೆ. ಈ ದೇಶದ ಅತಿ ಹೆಚ್ಚು ಎತ್ತರದ ಶಿಖರ ಆರ್‍ಜûಬ(6232 ಮೀ). ಈ ಪರ್ವತ ಶಂಕುವಿನಾಕೃತಿಯಲ್ಲಿದ್ದು ಉತ್ತರ ಅಮೆರಿಕದ ಅತ್ಯಂತ ಎತ್ತರದ ಮೂರನೆಯ ಪರ್ವತವಾಗಿದೆ.

	ಚಿಯಾಪಾಸ್ ಮೇಲ್ನಾಡು: ಟವಾಂಟ್‍ಪೆಕ್ ಭೂಕಂಠದ ಪೂರ್ವಕ್ಕೆ ಹಾಗೂ ಗ್ವಾಟಮಾಲದೊಂದಿಗೆ ಗಡಿಯ ಪಶ್ಚಿಮಕ್ಕೆ ಇರುವ ಪರ್ವತ ಪ್ರದೇಶ. ಕಡಿದಾದ ಹಾಗೂ ದುರ್ಗಮವಾದ ಈ ಬೆಟ್ಟ ಸು.4,890 ಮೀ ಎತ್ತರವಿದೆ. ಫಲವತ್ತಾದ ಚಿಯಾಪಾಸ್ ಕಣಿವೆಯಲ್ಲಿ ವ್ಯವಸಾಯವುಂಟು.

	ಯೂಕಟಾನ್ ಪರ್ಯಾಯ ದ್ವೀಪ: ಮೆಕ್ಸಿಕೋದ ಆಗ್ನೇಯ ತುದಿಯಲ್ಲಿರುವ ಈ ಭಾಗ ಮೆಕ್ಸಿಕೋ ಕೊಲ್ಲಿ ಮತ್ತು ಕೆರಿಬಿಯನ್ ಸಮುದ್ರಗಳ ನಡುವೆ ಇದೆ. ಇದರ  ಭಾಗ ಮೆಕ್ಸಿಕೋಗೆ ಸೇರಿದ್ದು. ಇದರ ಆಗ್ನೇಯಭಾಗ ಬಲೀeóï ಮತ್ತು ಗ್ವಾಟಮಾಲಗಳಿಗೆ ಸೇರಿದೆ. ಇದರ ಬಹುಭಾಗ ದಟ್ಟವಾದ ಉಷ್ಣವಲಯದ ಕಾಡುಗಳಿಂದ ಕೂಡಿದೆ. ಇದು ಮಾಯಾ ಇಂಡಿಯನ್ನರ ವಾಸಸ್ಥಾನವಾಗಿದ್ದು ಸಾವಿರಾರು ವರ್ಷಗಳ ಹಿಂದೆ ಇವರ ಪೂರ್ವಜರು ದೊಡ್ಡ ನಗರಗಳನ್ನು ಇಲ್ಲಿ ಸ್ಥಾಪಿಸಿದ್ದರು.

	ತೀರದ ಬಯಲು ಪ್ರದೇಶ: ಇದು ಪೂರ್ವದಲ್ಲಿ ಸೀಯರ್ ಮಾಡ್ರೀ ಓರಿಯಂಟಲ್ ಹಾಗೂ ಮೆಕ್ಸಿಕೋ ಕೊಲ್ಲಿಗಳ ನಡುವೆ ಮತ್ತು ಪಶ್ಚಿಮದಲ್ಲಿ ಸೀಯರ್ ಮಾಡ್ರೀ ಅಕ್ಸಿಡೆಂಟಲ್ ಹಾಗೂ ಪೆಸಿಫಿಕ್ ಸಾಗರಗಳ ನಡುವೆ ಇರುವ ಪ್ರದೇಶ. ಇದು ಕೆಲವು ಕಡೆ ಕೆಲವು ಕಿಮೀ ಮಾತ್ರ ಅಗಲವಿದ್ದು ಮತ್ತೆ ಕೆಲವೆಡೆ 322ಕಿಮೀ ಅಗಲವಿದೆ. ಪೆಸಿಫಿಕ್ ತೀರದ ಬಯಲು ಪ್ರದೇಶದ ಬಹುಪಾಲು ಮರುಭೂಮಿ. ಮೆಕ್ಸಿಕೋ ಕೊಲ್ಲಿಯ ತೀರದ ಬಯಲು ಪ್ರದೇಶ ದಟ್ಟವಾದ ಕಾಡುಗಳಿಂದಲೂ ಜೌಗು ಪ್ರದೇಶದಿಂದಲೂ ಕೂಡಿದೆ. ಇಲ್ಲಿ ಕ್ರಿಮಿಕೀಟಗಳೂ ಸಾಂಕ್ರಾಮಿಕ ರೋಗಗಳೂ ಹೆಚ್ಚು. ಸರ್ಕಾರ ಈ ರೋಗಗಳನ್ನು ನಿವಾರಿಸಿ ಫಲವತ್ತಾದ ಭೂ ಪ್ರದೇಶಗಳಲ್ಲಿ ಜನವಸತಿ ಕಲ್ಪಿಸಲು ಪ್ರಯತ್ನಿಸುತ್ತಿದೆ.
	ಬಾಜಾ ಕ್ಯಾಲಿಫೋರ್ನಿಯ: ಈ ಪ್ರದೇಶ ಮೆಕ್ಸಿಕೋದ ವಾಯವ್ಯ ತುದಿಯಿಂದ ದಕ್ಷಣಕ್ಕೆ ಸುಮಾರು 1304ಕಿಮೀ ಉದ್ದಕ್ಕೆ ಚಾಚಿಕೊಂಡಿರುವ ಇಕ್ಕಟ್ಟಾದ ಪ್ರದೇಶ. ಇದರ ಪೂರ್ವಭಾಗದಲ್ಲಿ ಕಡಿದಾದ ಬೆಟ್ಟಗಳಿವೆ. ಪಶ್ಚಿಮಭಾಗದಲ್ಲಿ ಪೆಸಿಫಿಕ್ ಸಾಗರವೂ ಪೂರ್ವಕ್ಕೆ ಕ್ಯಾಲಿಫೋರ್ನಿಯಾ ಕೊಲ್ಲಿಯೂ ಇವೆ.

	ನದಿ ಸರೋವರಗಳು: ಇಲ್ಲಿ ಹರಿಯುವ ನದಿಗಳ ಉದ್ದ ಕಡಿಮೆಯಿದ್ದು ರಭಸದಿಂದ ಹರಿಯುತ್ತವೆ. ಆಳ ಹೆಚ್ಚಾಗಿಲ್ಲದಿರುವುದರಿಂದ ನೌಕಾಯಾನಕ್ಕೆ ಯೋಗ್ಯವಿಲ್ಲ. ಆದರೆ ಈ ನದಿಗಳು ಜಲವಿದ್ಯುತ್ ಉತ್ಪಾದನೆಗೆ ಹಾಗೂ ನೀರಾವರಿಗೆ ಬಹಳ ಸಹಾಯಕವಾಗಿವೆ. ರೀಯೊ ಗ್ರಾಂಡ ನದಿ ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಗಡಿಯ  ಭಾಗ ಉದ್ದಕ್ಕೂ ಹರಿಯುತ್ತದೆ. ಪೂರ್ವ ಮೆಕ್ಸಿಕೋದ ಇತರ ಪ್ರಮುಖ ನದಿಗಳೆಂದರೆ ಪಾನ್‍ಕೋ, ಕೋಆಟ್‍ಸಕೋ ಆಲ್‍ಕಾಸ್, ಗ್ರೀಹಾಲ್ವ ಮತ್ತು ಊಸಮಸಿಂಟ.

	ಸೀಯರ್ ಮಾಡ್ರೀ ಅಕ್ಸಿಡೆಂಟಲ್‍ನಿಂದ 25ಕ್ಕೂ ಹೆಚ್ಚು ನದಿಗಳು ಕಡಿದಾದ ಇಳಿಜಾರಿನಲ್ಲಿ ಹರಿದು ಪೆಸಿಫಿಕ್ ಸಾಗರ ಹಾಗೂ ಕ್ಯಾಲಿಫೋರ್ನಿಯ ಕೊಲ್ಲಿಯನ್ನು ಸೇರುತ್ತವೆ. ಆಳವಾದ ಬರಾಂಕ ಡೆಲ್‍ಕೊಬ್ರೆ ಕಮರಿಯ ಮೂಲಕ ಯುರಿಕ್ ನದಿ ಹರಿಯುತ್ತದೆ. ಭೂವಿಜ್ಞಾನಿಗಳ ಅಭಿಪ್ರಾಯದಂತೆ ಇದು ಆರಿeóÉೂೀನಾದ ಗ್ರಾಂಡ್ ಕ್ಯಾನ್ಸಸ್‍ಗಿಂತ ಅಗಲವೂ ಆಳವೂ ಆಗಿದೆ. ಬಾಲ್ಸಾಸ್ ಹಾಗೂ ಲೆರ್ಮಾ ನದಿಗಳು ಮೆಕ್ಸಿಕೋ ನಗರ ಹಾಗೂ ಪೆಸಿಫಿಕ್ ಸಾಗರಗಳ ನಡುವೆ ಹರಿಯುತ್ತವೆ.

	ಚಾಪಾಲಾ ಸರೋವರ ಮೆಕ್ಸಿಕೋದ ಪಶ್ಚಿಮ ಮಧ್ಯಭಾಗದಲ್ಲಿ ಸು.1080 ಚಕಿಮೀ ವಿಸ್ತಾರವಾದ ಪ್ರದೇಶದಲ್ಲಿದ್ದು ದೇಶದ ಅತ್ಯಂತ ದೊಡ್ಡ ಸರೋವರವಾಗಿದೆ. ಇಲ್ಲಿಯ ಪಾಟ್ಸ್‍ಕ್ವಾರೋ ಉತ್ತರ ಅಮೆರಿಕದ ಅತ್ಯಂತ ಸುಂದರ ಸರೋವರಗಳಲ್ಲೊಂದು. ಇದು ಸಮುದ್ರಮಟ್ಟಕ್ಕೆ 20.401 ಮೀ ಎತ್ತರದಲ್ಲಿ ಮೆಕ್ಸಿಕೋ ನಗರದ ಪಶ್ಚಿಮದಲ್ಲಿ ಪರ್ವತಗಳ ನಡುವೆ ಇದೆ. ಮೆಕ್ಸಿಕೋ ನಗರದ ಸುತ್ತಮುತ್ತ ಅನೇಕ ಸಣ್ಣ ಸರೋವರಗಳಿವೆ. ದೇಶದ ಇತರ ದೊಡ್ಡ ಸರೋವರಗಳೆಂದರೆ ಕ್ವಿಟ್‍ಸೇವೊ ಹಾಗೂ ಮ್ಯಾಗ್ಡಲೀನ.

	ದೇಶದ ಅನೇಕ ಕಡೆ ಇರುವ ಬಿಸಿನೀರಿನ ಚಿಲುಮೆಗಳ ನೀರು ಆರೋಗ್ಯದಾಯಕವೆನ್ನುವರು. ಮೆಕ್ಸಿಕೋ ನಗರದ ಆಗ್ನೇಯ ಭಾಗದಲ್ಲಿರುವ ಟೇವಕಾನ್ ಚಿಲುಮೆಗಳ ನೀರನ್ನು ಬಾಟಲ್‍ಗಳಲ್ಲಿ ತುಂಬಿ ಹೊರದೇಶಾದ್ಯಂತ ಮಾರಲಾಗುತ್ತದೆ. ಆಗ್ವಸ್ಕಾಲ್‍ಯನ್‍ಟಾಸ್ ನಗರಕ್ಕೆ ಆ ಹೆಸರು ಬರಲು ಕಾರಣ ಅಲ್ಲಿಯ ಬಿಸಿನೀರಿನ ಚಿಲುಮೆಗಳು. ಸ್ಪಾನಿಷ್ ಭಾಷೆಯಲ್ಲಿ ಆಗ್ವಸ್ಕಾಲ್‍ಯನ್‍ಟಾಸ್ ಎಂದರೆ ಬಿಸಿನೀರು ಎಂದರ್ಥ.
	
ವಾಯುಗುಣ: ಕರ್ಕಾಟಕ ಸಂಕ್ರಾಂತಿ ವೃತ್ತ ಮೆಕ್ಸಿಕೋದ ಮಧ್ಯಭಾಗದಲ್ಲಿ ಹಾದು ಹೋಗುತ್ತದೆ. ಇದರಿಂದ ದೇಶದ ಉತ್ತರ, ಪೂರ್ವ ಹಾಗೂ ಮಧ್ಯ ಭಾಗಗಳ ಮೇಲೆ ಧ್ರುವದ ಕಡೆಯಿಂದ ತಂಪುಗಾಳಿ ಬೀಸಿ ಉಷ್ಣತೆ ಕಡಿಮೆಯಾಗುತ್ತದೆ; ಮಳೆ ಹೆಚ್ಚಾಗಿ ಬೀಳುತ್ತದೆ. ಉತ್ತರಭಾಗ ಮರುಭೂಮಿ ಪ್ರದೇಶವಾಗಿದ್ದು ಮಳೆ ಕಡಿಮೆ ಬೀಳುವುದರಿಂದ ಬೇಸಾಯಕ್ಕೆ ಅನುಕೂಲವಿಲ್ಲ. ಶುಷ್ಕ ಹವೆಯ ಕಾರಣ ಉತ್ತರ ಭಾಗದ ಹವಾಗುಣದಲ್ಲಿ ತೀವ್ರ ವೈಪರೀತ್ಯ ಕಂಡು ಬರುತ್ತದೆ. ದಕ್ಷಿಣ ಭಾಗದಲ್ಲಿ ತೇವಾಂಶದಿಂದ ಕೂಡಿದ ಹವೆಯಿದ್ದು ಮೆಕ್ಸಿಕೋ ಕೊಲ್ಲಿಯ ತೀರಪ್ರದೇಶದಲ್ಲಿ ವಾತಾವರಣ ಹೆಚ್ಚು ಉಷ್ಣತೆ ಹಾಗೂ ತೇವಾಂಶದಿಂದ ಕೂಡಿದ್ದು ಇಲ್ಲಿ ಮೇ ನಿಂದ ನವೆಂಬರ್ ತನಕ ಮಳೆ ಬೀಳುತ್ತದೆ.

	ಸಸ್ಯ ಹಾಗೂ ಪ್ರಾಣಿ ಸಂಪತ್ತು: ಇಲ್ಲಿಯ ಸಸ್ಯಸಂಪತ್ತು ಬಹು ವೈವಿಧ್ಯದಿಂದ ಕೂಡಿದೆ. ಇಲ್ಲಿ 12,000ಕ್ಕೂ ಹೆಚ್ಚು ಜಾತಿಯ ಸಸ್ಯಗಳಿದ್ದು ಅದರಲ್ಲಿ  ಭಾಗ ಸ್ಥಳೀಯವಾದವು. ದೇಶದ ಉತ್ತರ, ವಾಯವ್ಯ ಹಾಗೂ ಮಧ್ಯಭಾಗಗಳಲ್ಲಿ ನೀರಿನ ಆಸರೆ ಕಡಿಮೆಯಿರುವ ಕಾರಣ ಪಾಪಾಸುಕಳ್ಳಿ, ಭೂತಾಳೆ, ಮರಗೆಣಸು ಹಾಗೂ ಕುರುಚಲು ಗಿಡಗಳು ಬೆಳೆಯುತ್ತವೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಯೂಕಟಾನ್ ಮತ್ತು ಪಶ್ಚಿಮ ತೀರಗಳಲ್ಲಿ ಉಷ್ಣವಲಯದ ಕಾಡುಗಳನ್ನೂ ಸವನ್ನಾ ಹುಲ್ಲುಗಾವಲುಗಳನ್ನೂ ಕಾಣಬಹುದು. ಮಧ್ಯಭಾಗದ ಪರ್ವತಗಳು ಹಾಗೂ ಸೀಯರ್ ಮಾಡ್ರೀ ಪರ್ವತಗಳಲ್ಲಿ ಸುಮಾರು 1522ರಿಂದ 3962ಮೀ ಎತ್ತರದವರೆಗೆ ಶಂಕುವಿನಾಕಾರದ ಕಾಯಿಬಿಡುವ ಮರಗಳು ಹಾಗೂ ಜರ್ಮನ್ ಓಕ್ ಮರಗಳು ಹೇರಳವಾಗಿವೆ. ತೀರಪ್ರದೇಶಗಳಲ್ಲಿ ಹಾಗೂ ಜೌಗುಪ್ರದೇಶದಲ್ಲಿ ಮ್ಯಾಂಗ್ರೋವ್ ಮರಗಳಿವೆ. ಮೆಕ್ಸಿಕೋದ ಕಾಡುಗಳಲ್ಲಿ ಓಕ್, ಹಾರ್ನ್‍ಬೀಮ್, ಲಿಂಡೆನ್, ಪೈನ್, ಫರ್ ಮೊದಲಾದ ಗಟ್ಟಿಮರಗಳು ಬೆಳೆಯುತ್ತವೆ.

	ಇಲ್ಲಿ ದಕ್ಷಿಣ ಹಾಗೂ ಉತ್ತರ ಅಮೆರಿಕಗಳಲ್ಲಿರುವ ಪ್ರಾಣಿವರ್ಗಗಳು ಕಂಡು ಬರುತ್ತವೆ. ಮರುಭೂಮಿ ಪ್ರದೇಶಗಳಲ್ಲಿ ದಂಶಕ ಜಾತಿಗೆ ಸೇರಿದ ಪ್ರಾಣಿಗಳಿವೆ. ಪರ್ವತ ಪ್ರದೇಶಗಳಲ್ಲಿ ಕಪ್ಪುಕರಡಿ, ರಾತ್ರಿಸಂಚಾರಿ ಮಾಂಸಾಹಾರಿ ರಾಕೂನ್, ಬೆಕ್ಕಿನಜಾತಿಯ ಲಿಂಕ್ಸ್, ಪ್ಯೂಮ ಎಂಬ ಹಿಂಸ್ರ ಮೃಗ, ಕೆಂಪು ಹುಲಿ ಮೊದಲಾದ ಪ್ರಾಣಿವರ್ಗಗಳು ಹಾಗೂ ಸವನ್ನಾ ಪ್ರದೇಶದಲ್ಲಿ ಜಿಂಕೆ. ಆ್ಯಂಟ್ ಈಟರ್ ಹಾಗೂ ಮುಳ್ಳು ಹಂದಿಗಳನ್ನು ಕಾಣಬಹುದು. ದಕ್ಷಿಣ ಭಾಗದ ಉಷ್ಣವಲಯದ ಕಾಡುಗಳಲ್ಲಿ ಕೋತಿ, ಟೇಪರ್ ಹಾಗೂ ಜಾಗ್ವಾರ್‍ಗಳಿವೆ. ಇಲ್ಲಿಯ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಕ್ಯಾನನ್ ಡೆಲ್ ರಿಯೋ ಬ್ಲಾಂಕೊ, ಕೆಂಬ್ರೆಸ್ ಡಿ ಮಾಂಟೆರೆ. ಲಾ ಮಾಲಿಂಚೆ, ನೆವಾಡೋ ಡಿ ಟೊಲುಕಾ, ಸೀಯೆರಡಿ ಸ್ಯಾನ್‍ಪೆಡ್ರೂ ಮಾರ್ಟಿರ್ ಹಾಗೂ ಪಿಕೋ ಡಿ ಟ್ಯಾನ್‍ಸಿಟಾರೊ. ಮೀನು ಹಾಗೂ ಇತರ ಜಲಚರಗಳು ಕ್ಯಾಲಿಫೋರ್ನಿಯ ಕೊಲ್ಲಿ ಹಾಗೂ ಪೆಸಿಫಿಕ್ ಸಾಗರಗಳಲ್ಲಿ ಹೇರಳವಾಗಿ ದೊರೆಯುತ್ತವೆ.

	ಜನಜೀವನ: ಸ್ಪ್ಯಾನಿಷ್ ಮಾತನಾಡುವ ದೇಶಗಳ ಪೈಕಿ ಮೆಕ್ಸಿಕೋ ವಿಶ್ವದಲ್ಲಿಯೇ ಅತಿ ದೊಡ್ಡ ದೇಶ. ಅಮೆರಿಕ ಖಂಡದ ಮೂರನೆಯ ಅತಿ ಹೆಚ್ಚು ಜನಸಂಖ್ಯೆಯಿರುವ ದೇಶ (ಮೊದಲನೆಯದು ಅಮೆರಿಕ ಸಂಯುಕ್ತಸಂಸ್ಥಾನ, ಎರಡನೆಯದು ಬ್ರಜಿûಲ್). ಸ್ಪಾನಿಷ್ ಶೇಕಡಾ 92ರಷ್ಟು ಜನರ ಮಾತೃ ಭಾಷೆಯಾಗಿದೆ. ಇದಲ್ಲದೆ ಇಲ್ಲಿ ಸ್ಥಳೀಯ ಭಾಷೆಯ ಐದು ಸಮುದಾಯವಿವೆ. ಅವುಗಳೆಂದರೆ ನಾವಾಟ್, ಮಾಯ, ಜಾ ಪೊಟಿಕ್, ಓಟೋಮಿ ಮತ್ತು ಮಿಸ್‍ಟೆಕ್. ಈ ಸಮುದಾಯದಲ್ಲಿ 59 ಆಡುಭಾಷೆಗಳಿವೆ.

	ಇಲ್ಲಿಯ ಜನರಲ್ಲಿ ಶೇಕಡಾ 92.6ರಷ್ಟು ರೋಮನ್ ಕ್ಯಾಥೊಲಿಕ್ಕರು. 1857ರ ರಾಜ್ಯಾಂಗದ ಪ್ರಕಾರ ಚರ್ಚನ್ನು ದೇಶದ ಆಡಳಿತದಿಂದ ಪ್ರತ್ಯೇಕಿಸಲಾಯಿತು. 1917ರ ರಾಜ್ಯಾಂಗದಲ್ಲಿ ರೋಮನ್ ಕ್ಯಾಥೊಲಿಕ್ ಹಾಗೂ ಉಳಿದೆಲ್ಲ ಧರ್ಮಗಳ ಮೇಲೆ ಬಿಗಿಯಾದ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಯಾವ ಧಾರ್ಮಿಕ ಸಂಸ್ಥೆಯೂ ಭೂಮಿಯ ಒಡೆತನವನ್ನು ಹೊಂದುವಂತಿಲ್ಲ ಹಾಗೂ ಚರ್ಚಿನ ಆಸ್ತಿಯೆಲ್ಲವೂ ದೇಶಕ್ಕೆ ಸೇರಿದ್ದು. 1920ರ ದಶಕದಲ್ಲಿ ರಾಜಕೀಯದ ಮೇಲೆ ಪುರೋಹಿತಶಾಹಿಯ ಪ್ರಭಾವವನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಂಡಿತು. ಇದರ ಫಲವಾಗಿ 1929-31ರಲ್ಲಿ ಚರ್ಚುಗಳನ್ನು ಮುಚ್ಚಲಾಗಿತ್ತು. ಅನಂತರ ಸರ್ಕಾರ ಹಾಗೂ ಚರ್ಚುಗಳ ನಡುವೆ ಒಪ್ಪಂದವಾಗಿ ಸಾರ್ವಜನಿಕ ವ್ಯವಹಾರಗಳಲ್ಲಿ ತಲೆಹಾಕದ ಚರ್ಚ್‍ಗಳೆಲ್ಲವೂ ಮುಕ್ತವಾಗಿ ಚಟುವಟಿಕೆಗಳನ್ನು ನಡೆಸಲು ಅವಕಾಶವಾಯಿತು. 1980ರ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಶೇಕಡಾ 3.3ರಷ್ಟು ಪ್ರೊಟೆಸ್ಟಂಟರು ಹಾಗೂ 4.1ರಷ್ಟು ಉಳಿದ ಮತಾವಲಂಬಿಗಳು ಇದ್ದಾರೆ.

	ದೇಶದ ಜನಸಂಖ್ಯೆಯ ಅರ್ಧದಷ್ಟು ಭಾಗ ಮೆಸ್ಟಿಜೋಗಳು. ಇದನ್ನು ಬಿಟ್ಟರೆ ಎರಡನೆಯ ಅತಿದೊಡ್ಡ ಪಂಗಡ ಇಂಡಿಯನ್ನರು. ಇದಲ್ಲದೆ ಇಲ್ಲಿಯೇ ಹುಟ್ಟಿದ ಯುರೋಪಿಯನ್ನರು ಹಾಗೂ ಸ್ಪೇನ್, ಅಮೆರಿಕ ಸಂಯುಕ್ತಸಂಸ್ಥಾನ, ಚೀನ, ಫ್ರಾನ್ಸ್ ಹಾಗೂ ಗ್ವಾಟಮಾಲಗಳಿಂದ ವಲಸೆ ಬಂದವರಿದ್ದಾರೆ.

	ಆರ್ಥಿಕತೆ : ಮೆಕ್ಸಿಕೋದ ಅತಿ ಪ್ರಮುಖ ಉದ್ಯಮ ಪೆಟ್ರೋಲಿಯಮ್ ಉತ್ಪಾದನೆ. 1921ರಲ್ಲಿ ಪೆಟ್ರೋಲಿಯಮ್ ಉತ್ಪಾದನೆಯಲ್ಲಿ ಮೆಕ್ಸಿಕೋ ವಿಶ್ವದಲ್ಲಿಯೇ ಅಗ್ರಸ್ಥಾನ ಪಡೆದಿತ್ತು. ಆದರೆ 1938ರ ವೇಳೆಗೆ ಈ ಉದ್ಯಮವನ್ನು ರಾಷ್ಟ್ರೀಕರಣ ಮಾಡಿದಾಗ ಉತ್ಪಾದನೆ ತೀವ್ರಗತಿಯಲ್ಲಿ ಕೆಳಗಿಳಿಯಿತು. ತಬಾಸ್ಕೊ ಮತ್ತು ಚೆಯಾಪಾಸ್‍ಗಳಲ್ಲಿ ಬೃಹತ್‍ಪ್ರಮಾಣದ ಪೆಟ್ರೋಲಿಯಮ್ ನಿಕ್ಷೇಪಗಳು ಪತ್ತೆಯಾದಾಗ 1970ರ ದಶಕದಲ್ಲಿ ಉತ್ಪಾದನೆ ಗಮನಾರ್ಹ ಪ್ರಮಾಣದಲ್ಲಿ ಏರಿತು. 1981-84ರ ಅವಧಿಯಲ್ಲಿ ಮೆಕ್ಸಿಕೋ ಪೆಟ್ರೋಲಿಯಮ್ ಉತ್ಪಾದನೆಯಲ್ಲಿ ನಾಲ್ಕನೆಯ ದೇಶವಾಗಿತ್ತು. 1985ರಲ್ಲಿ ಮೆಕ್ಸಿಕೊದಲ್ಲಿಯ ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪ 250,000 ಮಿಲಿಯನ್ ಬ್ಯಾರಲ್‍ಗಳಿವೆಯೆಂದು ಅಂದಾಜು ಮಾಡಲಾಗಿದ್ದು ಇದು ವಿಶ್ವದಲ್ಲಿ ಐದನೆಯ ಅತಿ ಹೆಚ್ಚು ನಿಕ್ಷೇಪವಿರುವ ದೇಶವಿದೆ. ಅಮೆರಿಕಕ್ಕೆ ಅತ್ಯಂತ ಹೆಚ್ಜು ತೈಲವನ್ನು ಮೆಕ್ಸಿಕೋ ರಫ್ತು ಮಾಡುತ್ತದೆ. 1986ರಲ್ಲಿ ಪೆಟ್ರೋಲಿಯಮ್ ಬೆಲೆಯಲ್ಲಿಯ ಅಂತಾರಾಷ್ಟ್ರೀಯ ಇಳಿತ ಮೆಕ್ಸಿಕೋದ ಆರ್ಥಿಕ ಪರಿಸ್ಥಿತಿಯ ಮೇಲೆ ತೇವ್ರ ಪರಿಣಾಮ ಬೀರಿತು. ಇದರಿಂದ ಬರುವ ಆದಾಯ ಶೇಕಡಾ 58ರಷ್ಟು ಕಡಿಮೆಯಾಯಿತು. ಈಗ ಬರ್ಮುಡೆಜ್ ಕ್ಯಾಂಟೆರೆಲ್ ಮತ್ತು ಚೀಕಾಟಪೆಕ್‍ಗಳಲ್ಲಿ ತೈಲಬಾವಿಗಳಿವೆ. ನೈಸರ್ಗಿಕ ಅನಿಲದ ಬಗ್ಗೆ ಅಮೆರಿಕದೊಂದಿಗೆ ಆಗಿರುವ ಒಪ್ಪಂದದಂತೆ ಮೆಕ್ಸಿಕೋಗೆ ವಿಪುಲವಾಗಿ ಹಣ ದೊರೆಯುತ್ತದೆ. ಕೈಗಾರಿಕೆಗಳಿಗೆ ಬೇಕಾದ ಶಕ್ತಿಯಲ್ಲಿ ಶೇಕಡಾ 90ರಷ್ಟು ಪೆಟ್ರೋಲಿಯಮ್‍ನಿಂದಲೇ ದೊರೆಯುತ್ತಿದೆ.

	ಪ್ರವಾಸೋದ್ಯಮ ಮೆಕ್ಸಿಕೋದ ಎರಡನೆಯ ಅತಿಹೆಚ್ಚು ವಿದೇಶಿ ವಿನಿಮಯ ತರುವ ಉದ್ಯಮ. ಇಲ್ಲಿಗೆ ಬರುವ ಪ್ರವಾಸಿಗಳ ಪೈಕಿ ಶೇಕಡಾ 88ರಷ್ಟು ಅಮೆರಿಕ ಸಂಯುಕ್ತಸಂಸ್ಥಾನದವರು ಹಾಗೂ ಕೆನಡದವರು. ಇಲ್ಲಿಯ ಅಗ್ನಿ ಪರ್ವತಗಳು, ಸಮುದ್ರತೀರದ ಮನೋಹರ ಪ್ರಕೃತಿ ದೃಶ್ಯಗಳು, ಸಿಯೆರ ನೆವಾಡ ಪ್ರಸಿದ್ಧವಾದವು. ಮಾಯ ಹಾಗೂ ಅಜóಟೆಕ್ ನಾಗರಿಕತೆಗಳ ಹಾಗೂ ಸ್ಪಾನಿಷ್ ವಸಾಹತುಗಳೆ ಅವಶೇಷಗಳು ಚಾರಿತ್ರಿಕ ಹಾಗೂ ಕಲಾತ್ಮಕ ದೃಷ್ಟಿಯಿಂದ ಮಹತ್ವದ ಸ್ಥಾನ ಪಡೆದಿವೆ. ಪೆಸಿಫಿಕ್ ತೀರದ ಜಿ ವಾಟನೆ ಜೊ ಹಾಗೂ ಕೆರಿಮಿಯನ್ ತೇರದ ಕ್ಯಾನ್‍ಕನ್‍ಗಳನ್ನು ಪ್ರವಾಸ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗಿದೆ. 1985ರಲ್ಲಿ ಇಲ್ಲಿಗೆ ಬಂದ ಪ್ರವಾಸಿಗಳ ಸಂಖೈ 4,207,400 ಹಾಗೂ ಆದಾಯ 1,052 ಮಿಲಿಯನ್ ಡಾಲರ್.

	ಮೆಕ್ಸಿಕೋದಲ್ಲಿ ಖನಿಜ ಸಂಪತ್ತು ಅಪಾರ ಹಾಗೂ ವೈವಿಧ್ಯಮಯ, ಪ್ರಪಂಚದ ಬೆಳ್ಳಿಯ ಒಟ್ಟು ಉತ್ಪಾದನೆಯ 1/6 ಭಾಗ ಇಲ್ಲಿಯೇ ಸಿಗುತ್ತದೆ. ಫ್ಲೋರೈರ್ಡನ ಉತ್ಪಾದನೆಯಲ್ಲಿ ಇದು ಪ್ರಪಂಚದಲ್ಲಿಯೇ ಪ್ರಥಮ ಸ್ಥಾನವನ್ನೂ ಬಿಸ್ಮತ್‍ನ ಉತ್ಪಾದನೆಯಲ್ಲಿ ಮೂರನೆಯ ಸ್ಥಾನವನ್ನೂ ಪಡೆದಿದೆ. ಚವಾವಾಡ್ಯುರಾಂಗೋ ಸೊನೊರ ಕ್ವರೆಟಾರೊ ಮತ್ತು ನುಯೆವೊಲಿಯಾನ್‍ಗಳಲ್ಲಿಯ ಯುರೇನಿಯಮ್ನ ಒಟ್ಟು ನಿಕ್ಷೇಪ 15,000 ಟನ್ನುಗಳೆಂದು ಅಂದಾಜು ಮಾಡಲಾಗಿದೆ. ಕಲ್ಲಿದ್ದಲು ಹೇರಳವಾಗಿ ದೊರೆಯುತ್ತಿದ್ದು ಇದರ ಒಟ್ಟು ನಿಕ್ಷೇಪ 5,448 ಮಿಲಿಯನ್ ಟನ್ನುಗಳು. ಇಲ್ಲಿ ಕಬ್ಬಿಣದ ಅಪಾರ ನಿಕ್ಷೇಪವಿದೆ. ಇಲ್ಲಿಯ ಉಕ್ಕಿನ ಕೈಗಾರಿಕೆ ಲ್ಯಾಟಿನ್ ಅಮೆರಿಕದಲ್ಲಿಯೇ ಎರಡನೆಯ ಸ್ಥಾನ ಪಡೆದಿದೆ. ನೈಸರ್ಗಿಕ ಜೇನುತುಪ್ಪ ಮೆಕ್ಸಿಕೋದ ಒಂದು ಮುಖ್ಯ ರಫ್ತಿನ ವಸ್ತು.

	ಮೆಕ್ಸಿಕೋದಲ್ಲಿ ಒಟ್ಟು 48 ಮಿಲಿಯನ್ ಹೆಕ್ಟೇರುಗಳಷ್ಟು ಅರಣ್ಯವಿದ್ದು ಇಲ್ಲಿ ಮಹಾಗನಿ, ದೇವದಾರು, ಲಾಗ್‍ವುಡ್ ಮೊದಲಾದ ಗಟ್ಟಿಮರಗಳಿವೆ. ಇಲ್ಲಿಯ ಕಾಡುಗಳಲ್ಲಿರುವ ಸ್ಯಾಪೊಡಿಲದಿಂದ ಚ್ಯೂಯಿಂಗ್‍ಗಮ್ ತಯಾರಿಸುತ್ತಾರೆ.

	ಶೇಕಡಾ 80ರಷ್ಟು ಪ್ರದೇಶ ಕೃಷಿಯೋಗ್ಯವಲ್ಲದಿದ್ದರೂ ಮೆಕ್ಕೆಜೋಳ, ಗೋದಿ, ಅಕ್ಕಿ ಹಾಗೂ ಬೀನ್ಸ್ ಇವನ್ನು ಮುಖ್ಯವಾಗಿ ಬೆಳೆಯುತ್ತಾರೆ. ಇಲ್ಲಿಂದ ರಫ್ತಾಗುವ ಪ್ರಮುಖ ಉತ್ಪನ್ನಗಳು ಹತ್ತಿ, ಸಕ್ಕರೆ, ಕಾಫಿ, ಹಣ್ಣು ಮತ್ತು ತರಕಾರಿ. ರಾಷ್ಟ್ರೀಯ ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಮುಖವಾಗಿದೆ. ಅರಣ್ಯ ಹಾಗೂ ಮೀನುಗಾರಿಕೆಯಿಂದ ಶೇಕಡಾ 33ರಷ್ಟು ಉದ್ಯೋಗ ದೊರಕುತ್ತದೆ. ಮೆಕ್ಸಿಕೋದ ಈಗಿನ ಆರ್ಥಿಕ ನೀತಿಯಲ್ಲಿ ಜನಸಂಖ್ಯೆಯ ಬೆಳೆವಣಿಗೆಗೆ ಅನುಸಾರವಾಗಿ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಪಶುಪಾಲನೆಯೂ ಇಲ್ಲಿ ವ್ಯಾಪಕವಾಗಿದೆ. ಮೀನುಗಾರಿಕೆಯನ್ನು ಹೆಚ್ಚಾಗಿ ಸಹಕಾರಿ ಸಂಸ್ಥೆಗಳು ನಡೆಸುತ್ತವೆ. ಸೀಗಡಿಯನ್ನು ಅಮೆರಿಕಕ್ಕೆ ರಫ್ತು ಮಾಡುವ ಪ್ರಮುಖ ದೇಶವಾಗಿದೆ.

	ಇಲ್ಲಿಯ ಪ್ರಮುಖ ಕೈಗಾರಿಕೆಗಳು ಕಬ್ಬಿಣ ಮತ್ತು ಉಕ್ಕು. ಅಲ್ಯೂಮಿನಿಯಮ್, ಗಾಜು, ಕಾಗದ, ಬಟ್ಟೆ, ಇತ್ಯಾದಿ. ಕೈಗಾರಿಕೆಗಳು ಮೆಕ್ಸಿಕೋ ನಗರದಲ್ಲಿಯೇ ಹೆಚ್ಚು ಕೇಂದ್ರೀಕೃತವಾಗಿದೆ. ಮಾಂಟ ರೇ ಹಾಗೂ ಗ್ವಾಡಲಹಾರ ಪ್ರದೇಶಗಳಲ್ಲಿ ಕೈಗಾರಿಕೆಗಳಿವೆ. 1977ರಿಂದ 1980ರವರೆಗೆ ಕೈಗಾರಿಕಾ ಉತ್ಪಾದನೆಯ ವಾರ್ಷಿಕ ಏರಿಕೆಯ ಪ್ರಮಾಣ ಶೇಕಡಾ 8.1 ರಷ್ಟಿತ್ತು. 1982ರ ಅನಂತರ ಹಣದ ಅಪಮೌಲ್ಯ, ವಿದೇಶಿ ವಿನಿಮಯದ ಕೊರತೆ ಹಾಗೂ ಸ್ಥಳೀಯ ಮಾರುಕಟ್ಟೆಯ ಕುಸಿತದ ಕಾರಣಗಳಿಂದ ಕೈಗಾರಿಕೆಗಳ ಬೆಳೆವಣಿಗೆ ಸ್ಥಗಿತವಾಗಿ 1982ರಲ್ಲಿ ಶೇಕಡಾ 2.4ರಷ್ಟು ಹಾಗೂ 1985ರಲ್ಲಿ ತಲಾ ಶೇಕಡಾ 4.8 ಹಾಗೂ ಶೇಕಡಾ 4.2 ರಷ್ಟು ಮತ್ತೆ ಏರಿತು.

	ಮೆಕ್ಸಿಕೋದ ಆರ್ಥಿಕ ನೀತಿ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ಹಾಗೂ ಜನತೆಗೆ ಆರ್ಥಿಕ ಸೌಲಭ್ಯಗಳ ವಿತರಣೆಯನ್ನು ಪ್ರತಿಪಾದಿಸುತ್ತದೆ. ಸಾಮಾಜಿಕ ಭದ್ರತೆ ಹಾಗೂ ಸಾರ್ವಜನಿಕ ಆರೋಗ್ಯ ಕಾರ್ಯಗಳನ್ನು ಜಾರಿಗೆ ತರಲಾಗಿದೆ. ಅದಾಗ್ಯೂ ಮೆಕ್ಸಿಕೋದ ಒಟ್ಟು ಜನಸಂಖ್ಯೆಯ 1/3 ಭಾಗದಷ್ಟು ಜನ ಬಡತನದಲ್ಲಿದ್ದು ಒಂದೇ ಕೊಠಡಿಯ ಮನೆಗಳಲ್ಲಿ ವಾಸಿಸಬೇಕಾಗಿದೆ. ದೇಶದ ಬಹುಪಾಲು ಸಂಪತ್ತು ಮೆಕ್ಸಿಕೋ ನಗರ ಹಾಗೂ ಪ್ರಾಂತೀಯ ರಾಜಧಾನಿಗಳಲ್ಲಿ ಕೇಂದ್ರೀಕೃತವಾಗಿದೆ. ಜನಸಂಖ್ಯೆಯ ಏರಿಕೆಯ ಪ್ರಮಾಣ ಹೆಚ್ಚಾಗಿರುವುದರಿಂದ ಅಭಿವೃದ್ದಿಯ ಫಲ ಜನರಿಗೆ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ. ಕಳೆದ ಹಲವು ದಶಕಗಳಿಂದ ಹಣದುಬ್ಬರ ಹೆಚ್ಚಾಗಿ ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯುವ ಸಂಭವವಿದೆ. ಅಮೆರಿಕ ಸಂಯುಕ್ತಸಂಸ್ಥಾನಗಳೊಂದಿಗೆ ಸಮೀಪದ ಆರ್ಥಿಕ ಹಾಗೂ ವಾಣಿಜ್ಯ ಬಾಂಧವ್ಯವಿರುವುದರಿಂದ ಅಲ್ಲಿಯ ಆರ್ಥಿಕ ಏರಿಳಿತಗಳು ಇಲ್ಲಿಯೂ ಪ್ರಭಾವ ಬೀರುತ್ತವೆ. ಈಗ ಮೆಕ್ಸಿಕೋದ ಅತ್ಯಂತ ಜಟಿಲವಾದ ಸಮಸ್ಯೆಯೆಂದರೆ ವಿದೇಶಿ ವಿನಿಮಯದ ಕೊರತೆ.

	ಆಡಳಿತ : 1917ರ ರಾಜ್ಯಾಂಗದ ಪ್ರಕಾರ ಮೆಕ್ಸಿಕೋ ಪ್ರಜಾಸತ್ತಾತ್ಮಕ ಸಂಯುಕ್ತ ಗಣರಾಜ್ಯ, ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳ ಅಧಿಕಾರಗಳು ಸ್ಪಷ್ಟವಾಗಿ ವಿಭಾಗಿಸಲಾಗಿದ್ದು ರಾಷ್ಟ್ರದ ಅಧ್ಯಕ್ಷರು ಹಾಗೂ ಪ್ರಜಾಪ್ರತಿನಿಧಿಗಳ ನೇರ ಆಯ್ಕೆಗೆ ಅವಕಾಶವಿದೆ. ವೈಯಕ್ತಿಕ ಹಾಗೂ ಪೌರ ಸ್ವಾತಂತ್ರ್ಯ, ಹಕ್ಕುಗಳ ರಕ್ಷಣೆಯೊಂದಿಗೆ ಆರ್ಥಿಕ ಹಾಗೂ ರಾಜಕೀಯ ತತ್ತ್ವಗಳನ್ನೂ ರಾಜ್ಯಾಂಗದಲ್ಲಿ ನಮೂದಿಸಲಾಗಿದೆ.

	ಆರುವರ್ಷಗಳ ಒಂದು ಅವಧಿಗೆ ಚುನಾಯಿತರಾಗುವ ದೇಶದ ಅಧ್ಯಕ್ಷರು ಕ್ಯಾಬಿನೆಟ್ ಸದಸ್ಯರು, ಅಟಾರ್ನಿ ಜನರಲ್, ಪ್ರಾಂತೀಯ ಹಾಗೂ ಜಿಲ್ಲಾ ಗವರ್ನರುಗಳು, ಸೇನೆಯ ಉಚ್ಚ ಅಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಅಧ್ಯಕ್ಷರು ಬಹುಮತ ಪಡೆದಿರುವ ಇಲ್ಲಿಯ ರಾಜಕೀಯ ಪಕ್ಷದ ನೇತಾರರಾಗಿದ್ದು ತನ್ನ ಉತ್ತರಾಧಿಕಾರಿ ಹಾಗೂ ಶಾಸನಸಭೆಯ ಸದಸ್ಯರನ್ನು ಆಯ್ಕೆಮಾಡಲು ಅಧಿಕಾರ ಹೊಂದಿರುತ್ತಾರೆ. ರಾಜ್ಯಾಂಗದ ತಿದ್ದುಪಡಿಗೆ ಕಾಂಗ್ರೆಸ್ಸಿನಲ್ಲಿ 2/3 ಬಹುಮತದ ಸಮ್ಮತಿ ಹಾಗೂ ರಾಜ್ಯಗಳ ಶಾಸನಸಭೆಗಳ ಬಹುಮತದ ಸಮ್ಮತಿ ಬೇಕಾಗುತ್ತದೆ. ನಿಯಮಗಳನ್ನು ರೂಪಿಸಲು ಅಧ್ಯಕ್ಷರಿಗೆ ಅಧಿಕಾರವಿದೆ.

	ಇಲ್ಲಿಯ ಸಂಸತ್ತು ಚೇಂಬರ್ ಆಫ್ ಡೆಪ್ಯುಟೀಸ್ ಹಾಗೂ ಸೆನೆಟ್ ಎಂಬ ಎರಡು ಸದನಗಳಲ್ಲಿ ಹೊಂದಿದೆ. ಪ್ರತಿರಾಜ್ಯ ಹಾಗೂ ಸಂಯುಕ್ತ ಜಿಲ್ಲೆಗಳಿಂದ ಇಬ್ಬರು ಸೆನೆಟರುಗಳನ್ನು ಆರುವರ್ಷಗಳ ಅವಧಿಗೆ ಚುನಾಯಿಸಲಾಗುತ್ತದೆ. ಡೆಪ್ಯುಟಿಗಳನ್ನು ಮೂರು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ಪ್ರತಿಯೊಬ್ಬ ಡೆಪ್ಯುಟಿ ಸುಮಾರು 2,00,000 ಜನರನ್ನು ಪ್ರತಿನಿಧಿಸುತ್ತಾನೆ. ಡೆಪ್ಯುಟಿಗಳ ಒಟ್ಟು ಸಂಖ್ಯೆಯಲ್ಲಿ ಮುಕ್ಕಾಲು ಭಾಗ ನೇರ ಚುನಾವಣೆಯಲ್ಲೂ ಉಳಿದವರನ್ನು ರಾಜಕೀಯ ಪಕ್ಷಗಳು ದೇಶಾದ್ಯಂತ ಗಳಿಸಿರುವ ಮತಗಳ ಪ್ರಮಾಣದ ಮೇಲೂ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಂದು ರಾಜ್ಯ ಕೊನೆಪಕ್ಷ 3 ಡೆಪ್ಯುಟಿಗಳಿಂದ ಹಾಗೂ ಪ್ರತಿಯೊಂದು ಪ್ರಾಂತ್ಯ ಒಬ್ಬ ಡೆಪ್ಯುಟಿಯಿಂದ ಪ್ರತಿನಿಧಿಸಲ್ಪಡುತ್ತದೆ. ಕಾಂಗ್ರೆಸ್ಸಿನ ಸದಸ್ಯರು ಒಂದು ಬಾರಿ ಚುನಾಯಿತರಾದ ಮೇಲೆ ಮುಂದಿನ ಅವಧಿಗೆ ಮತ್ತೆ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ.

	ಕಾಂಗ್ರೆಸ್ಸಿನ ಅಧಿವೇಶನವಿಲ್ಲದಿರುವ ಕಾಲದಲ್ಲಿ ಅಧ್ಯಕ್ಷನ ಸಲಹೆಗಳನ್ನು ಅನುಮೋದಿಸಲು 15 ಜನ ಡೆಪ್ಯುಟಿಗಳು ಹಾಗೂ 14 ಮಂದಿ ಸೆನಟರುಗಳಿರುವ ಸ್ಥಾಯಿಸಮಿತಿಯಿದೆ. ಇದಕ್ಕೆ ತುರ್ತುಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರವೂ ಇದೆ.

	ಕಾರ್ಯಾಂಗಕ್ಕೆ ಹೋಲಿಸಿದರೆ ಶಾಸಕಾಂಗ ಪ್ರಾಮುಖ್ಯ ಕಡಿಮೆ. ಸಮಿತಿಯ ಸದಸ್ಯತ್ವದಲ್ಲಿ ಪ್ರತಿವರ್ಷ ಬದಲಾವಣೆ, ಕಡಿಮೆ ವೇತನ, ವ್ಯವಸ್ಥಿತವಾದ ಸಭೆ ಸಮಾಲೋಚನೆಗಳಿಲ್ಲದಿರುವುದು ಹಾಗೂ ಕಡಿಮೆ ಅವಧಿಯ ಅಧಿವೇಶನಗಳು ಕಾಂಗ್ರೆಸ್ಸಿನ ಅಧಿಕಾರದ ಬೆಳೆವಣೆಗೆಗೆ ಅಡ್ಡಿಯಾಗಿವೆ. ಸದನದ ಅಧ್ಯಕ್ಷರುಗಳು ತಿಂಗಳಿಗೊಮ್ಮೆ ಚುನಾಯಿತರಾಗುವ ಪದ್ಧತಿಯಿದ್ದು ಪ್ರತಿಯೊಂದು ಸದನದಲ್ಲಿಯ ಬಹುಮತ ಪಡೆದ ಪಕ್ಷದದ ನಾಯಕ ಸದನದ ಅಧ್ಯಕ್ಷನಿಗಿಂತ ಪ್ರಬಲನಾಗಿರುವುದು ಸಹ ಸದನದ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ. ಅದರ ಚೇಂಬರ್ ಆಫ್ ಡೆಪ್ಯುಟೀಸ್‍ಗೆ ದೇಶದ ಅಧ್ಯಕ್ಷನ ಚುನಾವಣೆಯ ಫಲಿತಾಂಶಗಳನ್ನು ಪರಿಶೀಲಿಸುವ, ಆಯವ್ಯಯ ಪಟ್ಟಿಯನ್ನು ಅನುಮೋದಿಸುವ ಹಾಗೂ ತೆರಿಗೆಗಳನ್ನು ಸೂಚಿಸುವ ಅಧಿಕಾರಗಳಿದ್ದು ಕಾರ್ಯಾಂಗದ ಮೇಲೆ ಅಧಿಕಾರ ಚಲಾಯಿಸಲು ಅವಕಾಶವಿದೆ.

	ಮೆಕ್ಸಿಕೋ ದೇಶವನ್ನು 31 ರಾಜ್ಯಗಳು ಹಾಗೂ ಒಂದು ಸಂಯುಕ್ತ ರಾಜ್ಯವಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಸ್ವಯಮಾಧಿಕಾರವಿದ್ದು ದೇಶದ ರಾಜ್ಯಾಂಗ ಮಾದರಿಯಲ್ಲೇ ರಚಿತವಾದ ರಾಜ್ಯಾಂಗವನ್ನು ಹೊಂದಿವೆ. ರಾಜ್ಯದ ಗಮರ್ನರುಗಳು ಜನರಿಂದ ನೇರವಾಗಿ ಆರುವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ರಾಜ್ಯದ ಶಾಸನಸಭೆಯ ಉಭಯ ಸದನಗಳಲ್ಲಿ ಡೆಪ್ಯುಟಿಗಳು ಮೂರು ವರ್ಷಗಳಿಗೊಮ್ಮೆ ಹಾಗೂ ಸೆನಟರುಗಳು ನಾಲ್ಕು ವರ್ಷಗಳಿಗೊಮ್ಮೆ ಚುನಾಯಿತರಾಗುತ್ತಾರೆ. ಸಂಯುಕ್ತ ಸರ್ಕಾರಕ್ಕೆ ವಹಿಸಿಕೊಟ್ಟಿರುವ ಅಧಿಕಾರಗಳನ್ನು ಬಿಟ್ಟು ಉಳಿದ ಎಲ್ಲ ಅಧಿಕಾರಗಳು ರಾಜ್ಯಸರ್ಕಾರಗಳಿಗೆ ಸೇರಿವೆ. ಅಧ್ಯಕ್ಷನಿಂದ ನೇಮಕಗೊಳ್ಳುವ ಜೆಫೆ ಅಥವಾ ರೀಜೆಂಟ್ ಸಂಯುಕ್ತ ರಾಜ್ಯಾಡಳಿತ ನಡೆಸುತ್ತಾನೆ.

	ಇಲ್ಲಿ 21 ಮ್ಯಾಜಿಸ್ಟ್ರೇಟರುಗಳಿರುವ ಸುಪ್ರೀಮ್ ಕೋರ್ಟಿದೆ. ಇವರನ್ನು 6 ವರ್ಷಗಳ ಅವಧಿಗೆ ಸೆನೆಟ್ಟಿನ ಅನುಮೋದನೆ ಪಡೆದು ಅಧ್ಯಕ್ಷರು ನೇಮಿಸುತ್ತಾರೆ. ಇದೆಲ್ಲದೆ 12 ಕಾಲೇಜಿಯೇಟ್ ಸಕ್ರ್ಯೂಟ್ ಕೋರ್ಟುಗಳು, 9 ಯೂನಿಟರಿ ಸಕ್ರ್ಯೂಟ್ ಕೋರ್ಟುಗಳು, 68 ಜಿಲ್ಲಾ ಕೋರ್ಟುಗಳು ಇವೆ. ಜನವರಿ 1930ರ ಪೀನಲ್ ಕೋಡಿನ ಪ್ರಕಾರ ಸೈನ್ಯವನ್ನು ಬಿಟ್ಟು ಉಳಿದೆಡೆ ಮರಣದಂಡನೆಯನ್ನು ರದ್ದುಪಡಿಸಲಾಗಿದೆ.

	ವಿದ್ಯಾಭ್ಯಾಸ : ಪ್ರಾಥಮಿಕ ಹಾಗೂ ಸೆಕೆಂಡರಿ ವಿದ್ಯಾಭ್ಯಾಸ ಇಲ್ಲಿ ಉಚಿತ ಹಾಗೂ ಕಡ್ಡಾಯ. ಧಾರ್ಮಿಕ ಸಂಸ್ಥೆಗಳು ಶಾಲೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸಲಾಗಿದೆ. ಎಲ್ಲ ಖಾಸಗಿ ಶಾಲೆಗಳೂ ಸರ್ಕಾರದಿಂದ ವಿಧಿಸಲಾದ ಶಿಕ್ಷಣ ಮಟ್ಟವನ್ನು ಕಾಪಾಡಬೇಕು. ಸಂಯುಕ್ತ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಸರ್ಕಾರದ ಅಧೀನದಲ್ಲಿದ್ದು ಉಳಿದ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳ ಅಧೀನದಲ್ಲಿದೆ. ರಾಜ್ಯಾಂಗದ ಪ್ರಕಾರ ವಿದ್ಯಾಭ್ಯಾಸ ಸೌಲಭ್ಯಗಳನ್ನು ಕಲ್ಪಿಸುವ ಹೊಣೆ ಸಂಯುಕ್ತ ಸರ್ಕಾರ, ರಾಜ್ಯಸರ್ಕಾರಗಳು ಹಾಗೂ ಪೌರಸಭೆಗಳಿಗೆ ಸೇರಿದೆ.

	ಇತಿಹಾಸ : ಕ್ರಿಸ್ತಪೂರ್ವದಲ್ಲಿ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದ ಇಂಡಿಯನ್ನರ ಇತಿಹಾಸದ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ. ಇವರ ಆಯುಧಗಳು, ಆಲಂಕಾರಿಕ ವಸ್ತುಗಳು, ಧಾರ್ಮಿಕ ಸಂಕೇತಗಳು ಹಾಗೂ ಕಟ್ಟಡಗಳ ಅವಶೇಷಗಳ ಆಧಾರದ ಮೇಲೆ ತಿಳಿದಿರುವುದೇನೆಂದರೆ ಮೆಕ್ಸಿಕೋ ಕಣಿವೆಯ ಇಂಡಿಯನ್ನರು ಬೆಳೆಯನ್ನು ಬೆಳೆದು ಹಿಟ್ಟು ಮಾಡುತ್ತಿದ್ದರು. ಇವರಿಗೆ ಬಟ್ಟೆ ನೇಯುವುದು ಮತ್ತು ಮಡಕೆ ತಯಾರಿಕೆ ಗೊತ್ತಿತ್ತು. ಹಸಿ ಇಟ್ಟಿಗೆಯಿಂದ ಮನೆಯನ್ನು ಕಟ್ಟುತ್ತಿದ್ದರು ಹಾಗೂ ಮನೆ ಬಳಕೆ ವಸ್ತುಗಳನ್ನು ಕಲ್ಲು, ಜೇಡಿಮಣ್ಣು, ಜ್ವಾಲಾಮುಖಿಯ ಲಾವಾದಿಂದುಂಟಾಗುವ ಗಾಜಿನಂಥ ಶಿಲೆಯಿಂದ ತಯಾರಿಸುತ್ತಿದ್ದರು.

	ಟಾಲ್‍ಟೆಕ್ ಇಂಡಿಯನ್ನರು ಮೆಕ್ಸಿಕೋ ಕಣಿವೆಗೆ ಕ್ರಿ. ಶ. 900ಕ್ಕೆ ಮೊದಲು ವಲಸೆ ಬಂದರು. ಕ್ರಿ. ಶ. 900ರಿಂದ 1200ರ ತನಕ ಇವರ ಹಾಗೂ ಇತರ ಇಂಡಿಯನ್ನರ ನಾಗರಿಕತೆ ಅತ್ಯುನ್ನತ ಮಟ್ಟದ್ದಾಗಿತ್ತು. ಅನಂತರ ಟಾಲ್‍ಟೆಕ್ ಇಂಡಿಯನ್ನರ ನಾಗರಿಕತೆ ಅತ್ಯುನ್ನತ ಮಟ್ಟದ್ದಾಗಿತ್ತು. ಅನಂತರ ಟಾಲ್‍ಟೆಕ್ ಇಂಡಿಯನ್ನರ ಒಳಜಗಳಗಳ ಕಾರಣ ಅವರ ಶಕ್ತಿ ಕುಂದಿ ಬೇರೆ ಜನಾಂಗದವರು ಪ್ರಬಲರಾದರು. 1300 ವೇಳೆಗೆ ಅಜ್óóಟೆಕ್ ಇಂಡಿಯನ್ನರು ಇಲ್ಲಿಯ ಪ್ರಮುಖ ಪಂಗಡವಾಗಿ ದಕ್ಷಿಣ ಮೆಕ್ಸಿಕೋದ ಇತರ ಎಲ್ಲ ಬುಡಕಟ್ಟುಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದಾರೆ. ಅವರ ರಾಜಧಾನಿ ಟೇನೋಜ್ ಟೀ ಟ್ಲಾನ್, ಈಗಿನ ಮೆಕ್ಸಿಕೋ ನಗರದ ಜಾಗದಲ್ಲಿದ್ದು ಈ ಸುಂದರ ನಗರದಲ್ಲಿ 100,000 ಜನರು ವಾಸಿಸುತ್ತಿದ್ದರೆಂದು ತಿಳಿದುಬಂದಿದೆ.

	ಫ್ರಾನ್ಸಿಸ್ಕೊ ಹರ್ನಾಂಡೆಜ್ ಡಿ ಕಾರ್ಡೋ ಎಂಬ ಸ್ಪಾನಿಷ್ ಯೋಧ, ಪರಿಶೋಧಕ ಮೆಕ್ಸಿಕೋಗೆ ಬಂದ ಮೊದಲನೆಯ ಯುರೋಪಿಯನ್, ಅವನು 1517ರಲ್ಲಿ ಯೂಕಟಾನ್ ಪರ್ಯಾಯ ದ್ವೀಪಕ್ಕೆ ಬಂದಿಳಿದಾಗ ಮಾಯ ಇಂಡಿಯನ್ನರು ದಾಳಿಮಾಡಿ ಹೊಡೆದೋಡಿಸಿದರು. ಕ್ಯೂಬದ ಸ್ಟನಿಷ್ ಗವರ್ನರ್ ಡಿಗೋ ವೆಲಾಕ್ವೆಜ್ ತನ್ನ ಸೋದರಳಿಯ ಜಾನ್ ಡಿ ಗ್ರಿಜಾಲ್ವನನ್ನು ಮೆಕ್ಸಿಕೋಗೆ 1518ರಲ್ಲಿ ಕಳುಹಿಸಿದ. ಇವನು ಮೆಕ್ಸಿಕೋ ತೀರಕ್ಕೆ ಬಂದು ಇಂಡಿಯನ್ನರೊಡನೆ ಚಿನ್ನದ ವ್ಯಾಪಾರ ಮಾಡಿದ; ಈ ಪ್ರದೇಶಕ್ಕೆ ನ್ಯೂ ಸ್ಪೇನ್ ಎಂದು ಹೆಸರಿಟ್ಟ. 1518ರಲ್ಲಿ ಸ್ಪಾನಿಷ್ ಗವರ್ನರನಿಂದ ಕಳುಹಿಸಲ್ಪಟ್ಟ ಹೆರ್ನಾನ್ ಕೋರ್ಟಿಜ್ 600 ಸೈನಿಕರೊಡನೆ ಬಂದು ಅeóïಟೆಕ್ಕರನ್ನು ಸೋಲಿಸಿದ. ಅಂದಿನಿಂದ ಸ್ವತಂತ್ರ ದೇಶವಾಗುವ ತನಕ (1821) ಮೆಕ್ಸಿಕೋ ಸ್ಪೇನ್ ಸಾಮ್ರಾಜ್ಯ ಭಾಗವಾಗಿ ಮುಂದುವರಿಯಿತು. 1525ರ ವೇಳೆಗೆ ಸ್ಪೇನ್ ಆಡಳಿತ ದಕ್ಷಿಣದಲ್ಲಿ ಗ್ವಾಟೆಮಾಲ ಹಾಗೂ ಹೊಂಡುರಾಸ್ರವರೆಗೆ ವಿಸ್ತರಿಸಲ್ಪಟ್ಟಿತ್ತು. ಮಧ್ಯ ಅಮೆರಿಕದ ಉಳಿ ಭಾಗಗಳು ಆ ವೇಳೆಗಾಗಲೇ ಸ್ಪಾನಿಷರ ವಶವಾಗಿದ್ದು ಯೂಕಟಾನಲ್ಲಿ ಮಾತ್ರ ಮಾಯ ಜನ ಪ್ರಬಲವಾಗಿ ವಿರೋಧಿಸಿದರು. ಈ ಪ್ರದೇಶ ಸ್ಪಾನಿಷರ ವಶಕ್ಕೆ ಬರಲು ಮತ್ತೆ ಇಪ್ಪತ್ತು ವರ್ಷಗಳು ಬೇಕಾಯಿತು. ಒಳಭಾಗದ ಇಂಡಿಯನ್ನರು ಮತ್ತೆ ಒಂದೂವರೆ ಶತಮಾನಗಳಷ್ಟು ಕಾಲ ಸ್ವತಂತ್ರರಾಗಿದ್ದರು.

	1535ರಲ್ಲಿ ನ್ಯೂಸ್ಪೇನ್, ಸ್ಪೇನ್ ದೇಶದ ವಸಾಹತು ಆಗಿ ಸ್ಪಾನಿಷ್ ಆಗಿ ಸ್ಪಾನಿಷ್ ದೊರೆ ರಾಜಪ್ರತಿನಿಧಿಯನ್ನು ನೇಮಿಸಿದ. ಸ್ಪಾನಿಷ್ ಆಡಳಿತಕಾಲದಲ್ಲಿ ಸ್ಪೇನ್ ದೇಶೀಯರೇ ಉನ್ನತ ಸರ್ಕಾರಿ ಹುದ್ಧೆಗಳು ಹಾಗೂ ಚರ್ಚುಗಳಲ್ಲಿ ನೇಮಕವಾಗುತ್ತಿದ್ದರು. ಇಂಡಿಯನ್ನರಿಗೆ ಅತಿ ಕೆಳಮಟ್ಟದ ಉದ್ಯೋಗ ಮಾತ್ರ ಲಭಿಸುತ್ತಿತ್ತು.

	1808ರಲ್ಲಿ ಮೊದಲನೆಯ ನೆಪೋಲಿಯನ್ ದೊರೆ ಸ್ಪೇನ್ ದೇಶವನ್ನು ಗೆದ್ದು ಏಳನೆಯ ಫರ್ಡಿನೆಂಡ್ ದೊರೆಯನ್ನು ಬಂಧನದಲ್ಲಿಟ್ಟ. ತನ್ನ ತಮ್ಮ ಜೋಸೆಫ್ ಬೋನಪಾರ್ಟೆಯನ್ನು ಸ್ಪಾನಿಷ್ ದೊರೆಯನ್ನಾಗಿ ಮಾಡಿದ. 1810 ಸೆಪ್ಟೆಂಬರ್ 16 ರಂದು ಸ್ಪಾನಿಷ್ ಜನ ಮಿಗೇಲ್ ಹಿಡಾಲ್ಗೊಯಿ ಕಾಸ್ಟಿಲ ಎಂಬ ಪಾದ್ರಿಯ ನೇತೃತ್ವಲ್ಲಿ ದಂಗೆಯೆದ್ದರು. ಇದೇ ಮೆಕ್ಸಿಕನ್ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೆಜ್ಜೆಯಾಯಿತು. ಈಗಲೂ ಸೆಪ್ಟೆಂಬರ್ 16ರಂದು ಮೆಕ್ಸಿಕನ್ನರು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಾರೆ.

	ಅನಂತರ ಅನೇಕ ಬಾರಿ ದಂಗೆಗಳಾಗಿ 1811 ಜನವರಿಯಲ್ಲಿ ಸ್ಪಾನಿಷರು ಹಿಡಾಲ್ಗೋನನ್ನು ಬಂಧಿಸಿ ಮರಣದಂಡನೆ ವಿಧಿಸಿದರು. ಅವನ ಜತೆಗಾರನಾದ ಜೋಸ್ ಮಾರಿಯ ಮಾರೆಲೋಸ್ ಯಿ ಪವನ್ ಇದರ ನೇತೃತ್ವ ವಹಿಸಿಕೊಂಡ. ಇವನನ್ನು ಸಹ 1815ರಲ್ಲಿ ಬಂಧಿಸಿ ಕೊಲ್ಲಲಾಯಿತು. 1871ರ ವೇಳೆಗೆ ದಂಗೆಯನ್ನು ಅಡಗಿಸಲಾಯಿತು.

	1820 ಡಿಸೆಂಬರ್‍ನಲ್ಲಿ ಅಗಸ್ಟಿನ್ ಡಿ ಇಟುರ್‍ಬೈಡ್ ಎಂಬ ಮೆಕ್ಸಿಕನ್ ಸೇನಾಧಿಕಾರಿಯನ್ನು ಸ್ಪಾನಿಷರ ವಿರುದ್ಧ ದಂಗೆಯನ್ನು ಅಡಗಿಸಲು ಕಳುಹಿಸಲಾಯಿತು. ಆದರೆ ಇವನು ದಂಗೆಕೋರರನ್ನು ಅಡಗಿಸುವ ಬದಲು ತಾನೇ ದಂಗೆಕೋರರ ನಾಯಕನಾದ. ಸ್ಪಾನಿಷ್ ಆಡಳಿತವನ್ನು ಕೊನೆಗಾಣಿಸಿ 1821 ಸೆಪ್ಟೆಂಬರ್‍ನಲ್ಲಿ ತಾನೇ ಆಡಳಿತದ ಮುಖ್ಯಸ್ಥನಾದ. 1822ರಲ್ಲಿ ಇಟುರ್‍ಬೈಡ್‍ನ ಸೈನಿಕರು ಅವನನ್ನು ಚಕ್ರವರ್ತಿಯೆಂದು ಘೋಷಿಸಿ ಮೊದಲನೆಯ ಅಗಸ್ಟಿನ್ ಎಂಬ ಬಿರುದನ್ನು ಕೊಟ್ಟರು. ಚುನಾಯಿತ ಕಾಂಗ್ರೆಸ್ ಇದನ್ನು ಒಪ್ಪಲಿಲ್ಲವಾದ್ದರಿಂದ ಕಾಂಗ್ರೆಸ್ಸನ್ನೇ ತೆಗೆದುಹಾಕಲಾಯಿತು. ಮುಂದೆ ಈತನ ವಿರುದ್ಧ ದಂಗೆಯೆದ್ದು 1823 ಮಾರ್ಚ್‍ನಲ್ಲಿ ಚಕ್ರವರ್ತಿಯ ಸ್ಥಾನ ಪರಿತ್ಯಾಗಮಾಡಲು ಬಲಾತ್ಕರಿಸಲಾಯಿತು. 1824 ಅಕ್ಟೋಬರ್ 4ರಂದು ಮೆಕ್ಸಿಕೋದೇಶವನ್ನು ಗಣರಾಜ್ಯವನ್ನಾಗಿ ಘೋಷಿಸುವ ರಾಜ್ಯಾಂಗವನ್ನು ಕಾಂಗ್ರೆಸ್ ಜಾರಿಗೆ ತಂದಿತು. ಗ್ವಾಡಲುಪೆ ವಿಕ್ಟೋರಿಯ ಎಂಬ ರಿಪಬ್ಲಿಕನ್‍ನಾಯಕನನ್ನು ಮೆಕ್ಸಿಕೋದ ಮೊದಲನೆಯ ಅಧ್ಯಕ್ಷನನ್ನಾಗಿ ಚುನಾಯಿಸಲಾಯಿತು.

	ಮುಂದಿನ 35 ವರ್ಷಗಳ ಕಾಲ ಸ್ವಾರ್ಥ ಸಾಧಕರಿಂದ ಒಳಜಗಳಗಳು ನಡೆದವು. 1835ರಲ್ಲಿ ಟೆಕ್ಸಾಸ್ ಮೆಕ್ಸಿಕೋದ ವಿರುದ್ಧ ದಂಗೆಯೆದ್ದಿತು. ಆ ಕಾಲದಲ್ಲಿ ಟೆಕ್ಸಾಸ್ ಮೆಕ್ಸಿಕೋದ ಪ್ರದೇಶವಾಗಿತ್ತು. ಆದರೆ ಅಲ್ಲಿಯ ಜನರೆಲ್ಲ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ವಲಸೆ ಬಂದವರಾಗಿದ್ದರು. 1836ರಲ್ಲಿ ಟೆಕ್ಸಾಸ್ ಸ್ವತಂತ್ರವಾಯಿತು. ಮೆಕ್ಸಿಕೋ ಟೆಕ್ಸಸ್‍ನ ಜೊತೆಗೆ ನ್ಯೂ ಮೆಕ್ಸಿಕೋ, ಕಾನ್ಸಾಸ್, ಓಕ್ಲಹಾಮಾ, ಕಾಲರ್ಯಾಡೊ ಹಾಗೂ ವ್ಯೋಮಿಂಗ್‍ನ ಕೆಲವು ಭಾಗಗಳನ್ನೂ ಕಳೆದುಕೊಂಡಿತು.

	1845ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನ ಟೆಕ್ಸಾಸನ್ನು ವಶಪಡಿಸಿಕೊಂಡ ಕಾರಣ 1846ರಲ್ಲಿ ಮೆಕ್ಸಿಕೋದೊಡನೆ ಯುದ್ಧವಾಯಿತು. ಮೆಕ್ಸಿಕೋ ಯುದ್ಧದಲ್ಲಿ ಸೋತು 1848 ಫೆಬ್ರುವರಿ 2 ರೆಂದು ಗ್ವಾಡಸುಪೆ ಹಿಡಾಲ್ಗೊ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇದರ ಪ್ರಕಾರ ಮೆಕ್ಸಿಕೋ ಕ್ಯಾಲಿಫೋರ್ನಿಯ, ನೆವಾಡ, ಉಟಾ ಆರಿeóÉೂೀನ, ವೋಮಿಂಗ್, ಕಾಲರ್ಯಾಡೊ ಮತ್ತು ನ್ಯೂ ಮೆಕ್ಸಿಕೋ ಇರುವ ಭಾಗಗಳನ್ನು ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಬಿಟ್ಟುಕೊಡಬೇಕಾಯಿತು.

	1860ರ ದಶಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗಳ ವಿರುದ್ಧ ಅಂತರ್ಯುದ್ಧ ನಡೆಯಿತು. ಮೆಕ್ಸಿಕೋ, ಗ್ರೀಟ್ ಬ್ರಿಟನ್, ಫ್ರಾನ್ಸ್, ಸ್ಪೇನ್‍ಗಳಿಗೆ ಕೊಡಬೇಕಾದ ಸುಮಾರು 100,000,000 ಡಾಲರುಗಳ ಸಾಲವನ್ನು ತೀರಿಸಲು ತಿರಸ್ಕರಿಸಿದುದರಿಂದ ಆ ದೇಶಗಳೊಡನೆ ಯುದ್ಧ ಪ್ರಾರಂಭವಾಯಿತು. 1863 ಜೋನ್‍ನಲ್ಲಿ ಮೆಕ್ಸಿಕೋ ನಗರವನ್ನು ಫ್ರಾನ್ಸ್ ವಶಪಡಿಸಿಕೊಂಡಿತು.

	1864ರಲ್ಲಿ ನೆಪೋಲಿಯನ್ ದೊರೆಯಾಗಿ ಆಸ್ಟ್ರಿಯನ್ ರಾಜಕುಮಾರ ಮ್ಯಾಕ್ಸಿಮಿಲಿಯನ್‍ನನ್ನು ಮೆಕ್ಸಿಕೋದ ಚಕ್ರವರ್ತಿಯನ್ನಾಗಿ ಮಾಡಲು ಪ್ರಯತ್ನಿಸಿದ. ಇದರಿಂದ ಫ್ರಾನ್ಸ್ ಹಾಗೂ ಮೆಕ್ಸಿಕೋಗಳಿಗೆ ತೀವ್ರ ಯುದ್ಧವಾಯಿತು. 1867ರಲ್ಲಿ ಮೆಕ್ಸಿಕನ್ ಸೇನೆ ಮ್ಯಾಕ್ಸಿಮಿಲಿಯನ್ನನನ್ನು ಸೆರೆಹಿಡಿದು ಗುಂಡಿಟ್ಟು ಕೊಂದಿತು.

	1876ರಲ್ಲಿ ಪೋರ್ಫಿರಿಯೊ ಡಿಯಾಜ್ ಎಂಬ ಸೇನಾಧಿಕಾರಿ ತನ್ನ ಸರ್ಕಾರದ ವಿರುದ್ಧ ದಂಗೆಯೆದ್ದು ತಾನೆ ಅಧ್ಯಕ್ಷನಾದ. 1911ರ ತನಕ ಇವನು ಮೆಕ್ಸಿಕೋದ ಸರ್ವಾಧಿಕಾರಿಯಾಗಿದ್ದ. 1911ರಲ್ಲಿ ಇವನನ್ನು ಓಡಿಸಿ ಮಾಥಿರೋನನ್ನು ಅಧ್ಯಕ್ಷನನ್ನಾಗಿ ಚುನಾಯಿಸಲಾಯಿತು. 1913ರಲ್ಲಿ ಮತ್ತೊಬ್ಬ ಸೇನಾಧಿಕಾರಿಯಾದ ಜನರಲ್ ವೆರ್ಟಾ ಮಾಥೆರೋನನ್ನು ಕೊಂದು ತಾನೇ ಅಧ್ಯಕ್ಷನಾದ. 1914 ಜುಲೈ 15ರಂದು ಪದವಿಗೆ ರಾಜೀನಾಮೆ ನೀಡಿದ. 1914-19ರ ತನಕ ಅಧಿಕಾರಕ್ಕಾಗಿ ದೇಶದಲ್ಲಿ ಕಚ್ಚಾಟವಾಯಿತು.

	1917ರಲ್ಲಿ ಮೆಕ್ಸಿಕೋ ಉದಾರನೀತಿಯ ಹೊಸ ರಾಜ್ಯಾಂಗವನ್ನು ಸ್ವೀಕರಿಸಿತು. ಇದರಲ್ಲಿ ಕ್ರಾಂತಿಯ ಮೂಲೋದ್ದೇಶಗಳಾದ ಭೂಮಾಲೀಕತ್ವದ ಸುಧಾರಣೆ, ಕಾರ್ಮಿಕರಿಗಾಗಿ ನಿಯಮಗಳು, ರೋಮನ್ ಕ್ಯಾಥೊಲಿಕ್ ಚರ್ಚಿನ ಅಧಿಕಾರ ನಿಯಂತ್ರಿಸುವುದೇ ಮೊದಲಾದವನ್ನು ಸೇರಿಸಲಾಯಿತು.

	1900ರಿಂದ ಬ್ರಿಟಿಷ್, ಡಚ್ ಮತ್ತು ಅಮೆರಿಕನ್ ಕಂಪನಿಗಳ ಮಾಲೀಕತ್ವದಲ್ಲಿದ್ದ ತೈಲಭಾವಿಗಳನ್ನು ಮೆಕ್ಸಿಕೋ 1938ರಲ್ಲಿ ವಶಪಡಿಸಿಕೊಂಡಿತು. ಇದರ ಮುಖ್ಯ ಕಾರಣ ಈ ಕಂಪನಿಗಳು ತಮ್ಮ ಮೆಕ್ಸಿಕನ್ ಕೆಲಸಗಾರರ ವೇತನಗಳನ್ನು ಏರಿಸಲು ನಿರಾಕರಿಸಿದುದು. ಇದರಿಂದ ಆನೇಕ ದೇಶಗಳಲ್ಲಿಯ ಪೆಟ್ರೋಲಿಯಮ್ ಮಾರುಕಟ್ಟೆಗಳನ್ನು ಕಳೆದುಕೊಳ್ಳಬೇಕಾಗಿ ಬಂದರೂ ಮೆಕ್ಸಿಕೋ ದೃಢವಾಗಿದ್ದಿತು. 1942ರಲ್ಲಿ ಮೆಕ್ಸಿಕೋ ಅಮೆರಿಕನ್ ಕಂಪನಿಗಳಿಗೆ ಹಾಗೂ 1947ರಲ್ಲಿ ಬ್ರಿಟಿಷ್ ಹಾಗೂ ಡಚ್ ಕಂಪನಿಗಳಿಗೆ ಅವರ ತೈಲಬಾವಿಗಳ ಬೆಲೆಯನ್ನು ಪಾವತಿಮಾಡಿತು.

	ಎರಡನೆಯ ಮಹಾಯುದ್ಧದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಇತರ ಮಿತ್ರ ರಾಷ್ಟ್ರಗಳೊಡನೆ ಸೇರಿ ಮೆಕ್ಸಿಕೋ ಯುದ್ಧ ಮಾಡಿತು. ಯುದ್ಧಾನಂತರ 1945ರಲ್ಲಿ ಮೆಕ್ಸಿಕೋ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. ಅನಂತರ ದೇಶ ತೀವ್ರವಾಗಿ ಅಭಿವೃದ್ಧಿ ಹೊಂದಿ ಸಂಪದ್ಯುಕ್ತವಾಯಿತು. 							   
(ಜೆ. ಎಸ್. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ